116ಕ್ಕೂ ಹೆಚ್ಚು.. ಹತ್ರಾಸ್‌ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ; ಅಸಲಿಗೆ ಆಗಿದ್ದೇನು?

author-image
admin
Updated On
116ಕ್ಕೂ ಹೆಚ್ಚು.. ಹತ್ರಾಸ್‌ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ; ಅಸಲಿಗೆ ಆಗಿದ್ದೇನು?
Advertisment
  • ಹತ್ರಾಸ್‌ನಲ್ಲಿ ಹೆಣಗಳ ರಾಶಿ, ಕಣ್ಣೀರು ಸುರಿಸುತ್ತಿರುವ ಸಾವಿರಾರು ಜನ
  • ಉಸಿರಾಡಲಾಗದೇ ದಾರುಣವಾಗಿ ಸಾವನ್ನಪ್ಪಿದ ನೂರಾರು ಮಂದಿ
  • ಭೋಲೆ ಬಾಬಾರ ಪ್ರವಚನದಲ್ಲಿ ಮಹಾ ದುರಂತಕ್ಕೆ ಕಾರಣವೇನು?

ಉತ್ತರಪ್ರದೇಶದಲ್ಲಿ ಕಂಡು ಕೇಳರಿಯದಂತಹ ದುರಂತವೊಂದು ಸಂಭವಿಸಿದೆ. ಶಿವನ ಆರಾಧನೆ ಮಾಡಿ ವಾಪಸ್​ ಆಗುತ್ತಿದ್ದವರ ಮೇಲೆ ಏಕಾಏಕಿ ಜವರಾಯನ ದರ್ಶನವಾಗಿ ಬಿಟ್ಟಿದೆ. ಮಕ್ಕಳು ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಉಸಿರಾಡಲಾಗದೇ ದಾರುಣವಾಗಿ ಸಾವನ್ನಪ್ಪಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

ಇದನ್ನೂ ಓದಿ: 100ಕ್ಕೂ ಹೆಚ್ಚು ಮಂದಿ ಬಲಿ ಪಡೆದ ಭೋಲೆ ಬಾಬಾ ಯಾರು..? ಏನಿವರ ಮಿಸ್ಟ್ರಿ? 

ಹೌದು.. ಘೋರ, ನಿಜಕ್ಕೂ ಘನಘೋರ.. ಸಾಲು ಸಾಲು ಹೆಣಗಳ ರಾಶಿ. ಕಣ್ಣೀರು ಸುರಿಸುತ್ತಿರುವ ಹಲವಾರು ಜನರು. ಈ ದೃಶ್ಯಗಳನ್ನ ನೋಡುತ್ತಾ ಇದ್ರೆ ಇದೇನು ಸ್ಮಶಾನವೋ ಅಂತಾ ಅನಿಸುಬಿಡುತ್ತೆ. ಅಷ್ಟೂ ಭೀಕರವಾಗಿರುವ ಘಟನೆ ನಡೆದು ಹೋಗಿದೆ.

publive-image

ಭೋಲೆ ಬಾಬಾರ ಪ್ರವಚನದಲ್ಲಿ ನಡೀತು ಮಹಾ ದುರಂತ!
ಹತ್ರಾಸ್​ ಕಾಲ್ತುಳಿತಕ್ಕೆ ನೂರಾರು ಮಂದಿ ದಾರುಣ ಬಲಿ
ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಗ್ರಾಮವೊಂದರಲ್ಲಿ ಧಾರ್ಮಿಕ ಸಮಾರಂಭವನ್ನ ಆಯೋಜನೆ ಮಾಡಲಾಗಿತ್ತು. ಹತ್ರಾಸ್​ನ ಭಾನ್ಪುರ್​ ಎಂಬ ಗ್ರಾಮದಲ್ಲಿ ವಿಶಾಲವಾದ ಬಯಲಿನಲ್ಲಿ ಟೆಂಟ್ ಹಾಕಿ, ಶಿವನ ಆರಾಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜನಸಂದಣಿ ಉಂಟಾಗಿದ್ದು, ಮಹಾದುರಂತ ಸಂಭವಿಸಿದೆ.

publive-image

ಭೋಲೆ ಬಾಬಾ ಪ್ರವಚನ ನಡೆಯುತ್ತಿದ್ದ ಸಂದರ್ಭಲ್ಲಿ ಕಾಲ್ತುಳಿತ ಸಂಭವಿಸಿಬಿಟ್ಟಿದೆ. ಬಯಲಿನಲ್ಲಿ ಹಾಕಲಾಗಿದ್ದ ಟೆಂಟ್​ನೊಳಗೆ ಗಾಳಿಯಾಡಲು ಸಣ್ಣ ರಂಧ್ರವೂ ಇರಲಿಲ್ಲ. ಇದರ ಪರಿಣಾಮ ಟೆಂಟ್​ನೊಳಗೆ ಜನ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ ಅಲ್ಲಿ ಆಮ್ಲಜನಕದ ಕೊರತೆಯುಂಟಾಗಿದ್ದು, ಜನರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ.

ದುರದೃಷ್ಟವಶಾತ್, ಅಲ್ಲಿ ಒಂದೇ ಒಂದು ಪ್ರವೇಶದ್ವಾರವಿತ್ತು. ಉಸಿರಾಟದ ತೊಂದರೆಯಿಂದಾಗಿ ಪ್ರವೇಶದ್ವಾರದ ಕಡೆಗೆ ಏಕಾಏಕಿ ಜನರು ಓಡಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ 116ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಭಕ್ತರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಅನ್ನೋ ಮಾಹಿತಿ ಇದೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಶರವೇಗದಲ್ಲಿ ಏರುತ್ತಲೇ ಇದೆ.


">July 2, 2024

ಘಟನೆಯಲ್ಲಿ ಸಾವಿಗೀಡಾದ 100ಕ್ಕೂ ಹೆಚ್ಚು ಮೃತದೇಹಗಳನ್ನ ಹತ್ರಾಸ್​ನ ಎಟಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಬಗ್ಗೆ ತನಿಖೆ ಮುಂದುವರೆದಿದೆ. ಈ ದುರಂತದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತ.. ಭೋಲೆ ಬಾಬಾ ಪ್ರವಚನ ಕೇಳಲು ಬಂದಿದ್ದ 80ಕ್ಕೂ ಹೆಚ್ಚು ಭಕ್ತರ ಸಾವು; ಆಗಿದ್ದೇನು?

ಅದೇನೆ ಹೇಳಿ... ದುರದೃಷ್ಟವೋ? ವಿಧಿ ಲಿಖಿತವೋ? ಗೊತ್ತಿಲ್ಲ. ಪ್ರವಚನ ಕೇಳಲು ಬಂದಿದ್ದ ನೂರಾರು ಜನ ಹೀಗೆ ಕಾಲ್ತುಳಿತದಿಂದ ಸಾವನ್ನಪ್ಪಿದ್ದಂತೂ ದುರಂತವೇ ಸರಿ. ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment